ಅಭಿಪ್ರಾಯ / ಸಲಹೆಗಳು

ರಾಷ್ಟ್ರೀಯ ಪಿಂಚಣಿ ಯೋಜನೆ

 

ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ: 01.04.2006 ರಂದು ಮತ್ತು ತದನಂತರ ರಾಜ್ಯ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ನೌಕರರಿಗೆ ರಾಷ್ಠೀಯ ಪಿಂಚಣಿ ಯೋಜನೆಯನ್ನು ದಿನಾಂಕ: 31.03.2006 ರ ಸರ್ಕಾರದ ಆದೇಶದನ್ವಯ ಜಾರಿಗೊಳಿಸಿದೆ. ಕರ್ನಾಟಕದಲ್ಲಿ ಈ ಯೋಜನೆಯು ದಿನಾಂಕ: 19.01.2010 ಮತ್ತು ದಿನಾಂಕ: 29.03.2010 ರ ಸರ್ಕಾರದ ಆದೇಶಗಳ ಅನ್ವಯ ದಿನಾಂಕ: 01.04.2010 ರಿಂದ ಕಾರ್ಯಾರಂಭಗೊಂಡಿದೆ. ಪೆನ್ಷನ್ ಫಂಡ್ ರೆಗ್ಯೂಲೇಟರಿ ಅಂಡ್ ಡೆವಲಪ್ ಮೆಂಟ್ ಅಥಾರಿಟಿ (PFRDA) ಯಿಂದ ನಿರ್ದಿಷ್ಟಪಡಿಸಿದಂತೆ ರಾಷ್ಠೀಯ ಪಿಂಚಣಿ ವ್ಯವಸ್ಥೆಯು ವಿನ್ಯಾಸಗೊಂಡು, ಎನ್.ಪಿ.ಎಸ್ ಟ್ರಸ್ಟ್ ಮತ್ತು ನ್ಯಾಷನಲ್ ಸೆಕ್ಯೂರಿಟಿ ಡಿಪಾಸಿಟರಿ ಲಿಮಿಡೆಟ್ (NSDL) ಇವುರುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಎನ್.ಎಸ್.ಡಿ.ಎಲ್ ಕೇಂದ್ರಿಯ ದಾಖಲೆ ನಿರ್ವಹಣಾ ಏಜೆನ್ಸಿಯಾಗಿ (CRA) ಕಾರ್ಯಾನಿರ್ವಹಿಸುತ್ತಿದೆ. ರಾಷ್ಠೀಯ ಪಿಂಚಣಿ ವ್ಯವಸ್ಥೆಯ ಸಮಗ್ರ ಅನುಷ್ಠಾನಕ್ಕೆ ಖಜಾನೆ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ರಾಜ್ಯದಲ್ಲಿ ರಾಷ್ಠೀಯ ಪಿಂಚಣಿ ಯೋಜನೆಯ ಸಮಗ್ರ ಅನುಷ್ಟಾನಕ್ಕಾಗಿ ನೂತನ ಪಿಂಚಣಿ ಯೋಜನೆ ಘಟಕವನ್ನು ಖಜಾನೆ ಆಯುಕ್ತಾಲಯದ ಅಡಿಯಲ್ಲಿ ಸ್ಥಾಪಿಸಲಾಗಿದೆ.

 PFRDA ಯು ದಿನಾಂಕ:30.6.2013 ರವರೆಗೆ ಬ್ಯಾಂಕ್ ಅಫ್ ಇಂಡಿಯಾ, ಮುಂಬೈ ಟ್ರಸ್ಟೀ ಬ್ಯಾಂಕ್ ಆಗಿದ್ದು, ದಿನಾಂಕ: 01.07.2013 ರಿಂದ ಅಕ್ಸಿಸ್ ಬ್ಯಾಂಕ್ ಅನ್ನು ಟ್ರಸ್ಟೀ ಬ್ಯಾಂಕ್‌ ಆಗಿ ನೇಮಿಸಲಾಗಿದೆ. SBI, UTI ಮತ್ತು LIC ಗಳು ಪಿಂಚಣಿ ನಿಧಿ ಕಾರ್ಯ ನಿರ್ವಾಹಕರಾಗಿರುತ್ತಾರೆ. ಪ್ರಸ್ತುತ ಪಿಂಚಣಿ ನಿಧಿಯನ್ನು 39% (SBI) 17% (UTI) ಮತ್ತು 44% (LIC) ರ ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ.

 

 • ರಾಷ್ಠೀಯ ಪಿಂಚಣಿ ಯೋಜನೆಯು ಅಂಶದಾಯಿ ಕೊಡುಗೆಯ ವಿಶ್ರಾಂತಿ ವೇತನವಾಗಿದ್ದು, ನೌಕರರ ಮೂಲ ವೇತನದ ಹಾಗೂ ತುಟ್ಟಿ ಭತ್ಯೆಯ 10% ರ ಮೊತ್ತ ನೌಕರನ ವಂತಿಗೆಯಾಗಿದ್ದು, ದಿನಾಂಕ: 01.04.2019 ರಿಂದ ಸರ್ಕಾರದ ವಂತಿಗೆಯನ್ನು ಶೇ 10% ರಿಂದ 14% ಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರವು ಭರಿಸುತ್ತಿದೆ.
 • ದಿನಾಂಕ: 01.04.2020 ರಿಂದ ಎಸ್-1 ನೋಂದಣಿ ಕಾರ್ಯವನ್ನು online ಮೂಲಕ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. ಇದರಿಂದ ನೌಕರರಿಗೆ ಯಾವುದೇ ವಿಳಂಬವಿಲ್ಲದೇ ಪ್ರಾನ್ ಸಂಖ್ಯೆ ಹಂಚಿಕೆಯಾಗುತ್ತಿದೆ.
 • ನೋಂದಣಿಯಾದ ನಂತರ ನೌಕರರ ಮಾಹಿತಿಯಲ್ಲಿ(ನೌಕರರ ಹೆಸರು, ವಿಳಾಸ, ನಾಮನಿರ್ದೇಶನ, ಬ್ಯಾಂಕ್‌ ಮಾಹಿತಿ, ಮೊಬೈಲ್‌ ಸಂಖ್ಯೆ, ಇ-ಮೇಲ್‌ ಐಡಿ) ಯಾವುದೇ ತಿದ್ದುಪಡಿಯಾಗಬೇಕಿದ್ದರೆ ಮೊದಲಿಗೆ ಡಿಡಿಓರವರು ಹೆಚ್.ಆರ್.ಎಂ.ಎಸ್ ನಲ್ಲಿ ನೌಕರರ ಮಾಹಿತಿಯನ್ನು ತಿದ್ದುಪಡಿ ಮಾಡಿ, ತದನಂತರ NSDL/CRA ವೆಬ್‌ ಸೈಟ್‌ನಲ್ಲಿ ಡಿಡಿಓ ರವರಿಗೆ ನೀಡಿರುವ Login ಮೂಲಕ ನೌಕರರ ಮಾಹಿತಿಯನ್ನು ತಿದ್ದುಪಡಿ ಮಾಡಿ  ಸಿಸ್ಟಂ ಜನರೇಟೆಡ್‌‌ ಎಸ್-2 ಫಾರಂ ಹಾಗೂ ಸಿ.ಆರ್.ಎ ರವರ acknowledgement id ಯೊಂದಿಗೆ ಪ್ರಸ್ತಾವನೆಯನ್ನು ಸಂಬಂಧಪಟ್ಟ ಖಜಾನೆಗೆ ಸಿ.ಆರ್.ಎ ರವರಲ್ಲಿ ಪ್ರಾಧಿಕರೀಸಲು ಸಲ್ಲಿಸಬೇಕಿರುತ್ತದೆ. ಅಥವಾ ಡಿಡಿಓರವರು  ನೌಕರರ ಮಾಹಿತಿಯ ತಿದ್ದುಪಡಿ ಮಾಡಿ ಸಿಸ್ಟಂ ಜನರೇಟೆಡ್‌‌ ಎಸ್-2 ನಮೂನೆ ಹಾಗು ಇನ್ನಿತರ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಸಂಬಂಧಪಟ್ಟ ಖಜಾನೆಗೆ ಸಲ್ಲಿಸಬಹುದು..
 • ಎನ್.ಪಿ.ಎಸ್. ಅಧಿಕಾರಿ/ನೌಕರರ ಪ್ರಾನ್‌ ಕಾರ್ಡ್‌ ನಲ್ಲಿ ಪೋಟೊ ಮತ್ತು ಸಹಿ ಬದಲಾವಣೆಯಾಗಬೇಕಿರುವ ಸಂದರ್ಭದಲ್ಲಿ S7 & S8 ನಮೂನೆ ಅನ್ನು ಸಂಬಂಧಪಟ್ಟ ಡಿಡಿಓಗಳ ಮೂಲಕ ನೌಕರರು ಖಜಾನೆಗೆ ಸಲ್ಲಿಸಬೇಕಿರುತ್ತದೆ.

 

 • ಎನ್.ಪಿ.ಎಸ್ ನೌಕರರ ವೇತನದಿಂದ ಎನ್.ಪಿ.ಎಸ್ ವಂತಿಗೆಯನ್ನು ಕಟಾವಣೆ ಮಾಡಿ ವೇತನ  ಸಿದ್ದಪಡಿಸಲು ಹೆಚ್.ಆರ್.ಎಂ.ಎಸ್ ನಲ್ಲಿ ಅನುವು ಮಾಡಿಕೊಡಲಾಗಿದೆ. ನೌಕರರ ವೇತನದಿಂದ ಕಟಾಯಿಸಲಾದ ವಂತಿಗೆಗೆ ಶೇ 14% ರ ಸರ್ಕಾರಿ ವಂತಿಗೆಯನ್ನು ಸೇರಿಸಿ  ಖಜಾನೆಗಳಿಂದ  SCF ಅನ್ನು CRAಗೆ ಖಜಾನೆ- 2 ಏಕೀಕರಣದ ಮೂಲಕ ಅಪ್ ಲೋಡ್ ಮಾಡಲಾಗುತ್ತಿದೆ. ನಂತರ ಟ್ರಸ್ಟೀ ಬ್ಯಾಂಕಿಗೆ ವರ್ಗಾಯಿಸಲ್ಪಟ್ಟ ಮೊತ್ತ ಹಾಗೂ CRA ಗೆ ಖಜಾನೆಯಿಂದ upload ಮಾಡಿದ ಮಾಹಿತಿಯೊಂದಿಗೆ ತಾಳೆಯಾದ ನಂತರ ನೌಕರರ ಪ್ರಾನ್ ಖಾತೆಗಳಿಗೆ ಜಮೆಯಾಗಿ ಮೇಲೆ ತಿಳಿಸಿದ ಅನುಪಾತದಲ್ಲಿ PFM (ಪಿಂಚಣಿ ನಿಧಿ ನಿರ್ವಹಣೆ) ಹೂಡಿಕೆಯಾಗುತ್ತದೆ.

 

 ಬ್ಯಾಕ್ ಲಾಗ್:-

ನೂತನ ಪಿಂಚಣಿ ವ್ಯವಸ್ಥೆಯು 01.04.2006 ರಿಂದ ಜಾರಿಗೊಂಡಿದ್ದರೂ ಕರ್ನಾಟಕದಲ್ಲಿ 01.04.2010 ರಿಂದ ಕಾರ್ಯರಂಭಗೊಂಡಿರುವುದರಿಂದ, ಎನ್.ಪಿ.ಎಸ್ ನೌಕರರು ಸೇವೆಗೆ ಸೇರಿದ ದಿನಾಂಕದಿಂದ ಅವರ ನಿರಂತರ ವಂತಿಗೆಯ ಕಟಾವಣೆ ಪ್ರಾರಂಭವಾಗುವ ಹಿಂದಿನ ತಿಂಗಳ ಅವಧಿಯವರೆಗಿನ ವಂತಿಗೆಯು ಬ್ಯಾಕ್ ಲಾಗ್ (ಹಿಂಬಾಕಿ) ವಂತಿಗೆ ಎಂದು ಪರಿಗಣಿಸಿಲ್ಪಟ್ಟಿದೆ. ಬ್ಯಾಕ್ ಲಾಗ್ ವಂತಿಗೆಯು ನೌಕರರ ವಂತಿಗೆ  ಮತ್ತು ಸರ್ಕಾರ  ವಂತಿಗೆ ಎರಡೂ ಸಹ ಸೇರಿರುತ್ತದೆ.

   ನೌಕರರ ಬ್ಯಾಕ್‌ ಲಾಗ್‌ ವಂತಿಗೆ ಪಾವತಿ ಮಾಡಲು  ಮೂರು ವಿಧಧ ಆಯ್ಕೆಗಳನ್ನು ನೀಡಲಾಗಿದೆ (1) ಒಂದೇ ಇಡಿಗಂಟಿನಲ್ಲಿ, (2) ಮಾಸಿಕ ಸಮ ಕಂತುಗಳಲ್ಲಿ ಅಥವಾ (3) ಕಂತುಗಳ ಗುಣಕದಲ್ಲಿ ಬ್ಯಾಕ್ ಲಾಗ್ ವಂತಿಗೆಯನ್ನು ಪಾವತಿಸಬಹುದಾಗಿದೆ. ಆದರೆ ಸರ್ಕಾರಿ ವಂತಿಗೆಯನ್ನು ಅರ್ಹ ನೌಕರರ ಷೆಡ್ಯೂಲ್-IV ಮತ್ತು ಷೆಡ್ಯೂಲ್- V ಗಳನ್ನು ಸಂಬಂಧಿಸಿದ DDO ಗಳಿಂದ ಸ್ವೀಕೃತಗೊಂಡ ನಂತರ ಶೇ 8% ಚಕ್ರಬಡ್ಡಿಯೊಂದಿಗೆ ಒಂದೇ ಕಂತಿನಲ್ಲಿ ಎನ್.ಪಿ.ಎಸ್. ಘಟಕದ ಮೂಲಕ ಪಾವತಿಸಲಾಗುವುದು. ಸರ್ಕಾರದ ಬ್ಯಾಕ್ ಲಾಗ್ ಮೇಲಿನ ಬಡ್ಡಿ ಪಾವತಿಯನ್ನು ದಿನಾಂಕ: 30.06.2016 ರ ಅಂತ್ಯಕ್ಕೆ (ಸರ್ಕಾರದ ಆದೇಶದ ಸಂ: FD/(SPL)176PEN2014 ದಿನಾಂಕ:05.05.2016 ಅನ್ವಯ) ಸ್ಥಗಿತಗೊಳಿಸಲಾಗಿದೆ.

 

ದಿನಾಂಕ: 01.04.2010 ರಿಂದ ಆಗಸ್ಟ್ -2021 ರ ಮಾಹೆಯ ಅಂತ್ಯಕ್ಕೆ ಎನ್.ಪಿ.ಎಸ್ ಸಂಬಂಧಿತ ಕಾರ್ಯದ ಪ್ರಗತಿಯು  ಕೆಳಕಂಡಂತಿದೆ.

ಸಿ.ಆರ್. ರವರಲ್ಲಿ ನೋಂದಣಿ

ನೋಂದಾಯಿಸಿದ ಪಿ..ಓಗಳ ಸಂಖ್ಯೆ

ಡಿ.ಡಿಓ ಗಳ ಸಂಖ್ಯೆ

ಸಿ.ಆರ್. ರವರಲ್ಲಿ ನೌಕರರ ನೋಂದಣಿ ಸಂಖ್ಯೆ.

243

25209

2,49,141.

 

 ಪ್ರಾನ್ ಖಾತೆಯಿಂದ ಭಾಗಶಃ ಹಿಂಪಡೆತ:-

 ಎನ್.ಪಿ.ಎಸ್ ನೌಕರರ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಕನಿಷ್ಠ ಮೂರು ವರ್ಷ ಸೇವೆ ಪೂರೈಸಿದ ನೌಕರರು ಕೆಲವೊಂದು ಆಯ್ದ ಸಂದರ್ಭದಲ್ಲಿ ನೌಕರರ ವಂತಿಗೆಯ ‌ ಗರಿಷ್ಟ ಶೇ. 25% ರಷ್ಟು ಮೊತ್ತವನ್ನು  (ಅದರ ಮೇಲಿನ ಆದಾಯವನ್ನು ಹೊರತುಪಡಿಸಿ) ಸರ್ಕಾರದ ಆದೇಶ ಸಂ: ಆಇ(ವಿ) 69 ಪಿಇಎನ್ 2016, ದಿನಾಂಕ: 26.06.2018 ರನ್ವಯ ಹಿಂಪಡೆಯಬಹುದು.

ಸೇವೆಯಿಂದ ಹೊರಬಂದ ಪ್ರಕರಣಗಳು :-

 1. ಸೇವೆಯಿಂದ ವಜಾಗೊಂಡಿರುವ ನೌಕರರ ಪ್ರಾನ್ ಖಾತೆಯಲ್ಲಿ ಶೇಖರಗೊಂಡಿರುವ ಮೊತ್ತವನ್ನು ಸರ್ಕಾರದ ಆದೇಶ ಸಂ: ಆಇ(ವಿ)94 ಪಿಇಎನ್ 2016, ದಿನಾಂಕ: 27.05.2019 ಹಾಗೂ06.2020 ರನ್ವಯ ಇತ್ಯರ್ಥಪಡಿಸಬಹುದಾಗಿದೆ.
 2. ಎನ್.ಪಿ.ಎಸ್ ನೌಕರರು ಸೇವೆಯಲ್ಲಿರುವಾಗಲೇ ಮೃತರಾದ/ಸೇವೆಯಿಂದ ನಿವೃತ್ತ/ಸೇವೆಗೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಪ್ರಾನ್ ಖಾತೆಯಲ್ಲಿ ಶೇಖರಣೆಗೊಂಡಿರುವ ಮೊತ್ತವನ್ನು ಸರ್ಕಾರದ ಆದೇಶದ ಸಂ: ಆಇ(ವಿ) 203 ಪಿಇಎನ್ 2012 (ಪಿ), ದಿನಾಂಕ: 18.05.2016 ರನ್ವಯ ಇತ್ಯರ್ಥಪಡಿಸಲಾಗುತ್ತಿದೆ.
 3. ಸರ್ಕಾರದ ಆದೇಶದ ಸಂಖ್ಯೆ: ಆಇ 34 ಪಿಇಎನ್‌ 2018 ದಿನಾಂಕ: 23.06.2018 ರ ಅನ್ವಯ ದಿನಾಂಕ: 01.04.2018 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮೃತರಾದ ಅಧಿಕಾರಿ/ಸಿಬ್ಬಂದಿ ವರ್ಗದವರ ನಾಮನಿರ್ದೇಶಿತರಿಗೆ ಕುಟುಂಬ ಪಿಂಚಣಿ ಸೌಲಭ್ಯ ಒದಗಿಸಲಾಗಿದೆ. ಮೃತರ ನಾಮನಿರ್ದೇಶಿತರು ಕುಟುಂಬ ಪಿಂಚಣಿ ಆಯ್ಕೆ ಮಾಡಿಕೊಂಡಲ್ಲಿ ಪ್ರಾನ್‌ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಬೇಕಿರುತ್ತದೆ.
 4. ಸರ್ಕಾರದ ಆದೇಶದ ಸಂಖ್ಯೆ: ಆಇ 34 ಪಿಇಎನ್‌ 2018 ದಿನಾಂಕ: 23.06.2018 ರ ಅನ್ವಯ ದಿನಾಂಕ: 01.04.2018 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮೃತರಾದ ಅಧಿಕಾರಿ/ಸಿಬ್ಬಂದಿ ವರ್ಗದವರ ನಾಮನಿರ್ದೇಶಿತರಿಗೆ ಮರಣ ಉಪದಾನದ ಸೌಲಭ್ಯವನ್ನು ಒದಗಿಸಲಾಗಿದೆ.
 5. ಸರ್ಕಾರದ ಆದೇಶದ ಸಂಖ್ಯೆ: ಆಇ 34 ಪಿಇಎನ್‌ 2018 ದಿನಾಂಕ: 23.06.2018 ರ ಅನ್ವಯ ದಿನಾಂಕ: 01.04.2018 ರಂದು ಮತ್ತು ತದನಂತರ ಸೇವೆಯಿಂದ ನಿವೃತ್ತಿ ಹೊಂದುವ ಅಧಿಕಾರಿ/ಸಿಬ್ಬಂದಿ ಗಳಿಗೆ ನಿವೃತ್ತಿ ಉಪದಾನದ ಸೌಲಭ್ಯವನ್ನು ಒದಗಿಸಲಾಗಿದೆ.

 ಸ್ವಾಯತ್ತ ಸಂಸ್ಥೆಗಳಲ್ಲಿ ಎನ್.ಪಿ.ಎಸ್. ಅನುಷ್ಠಾನ:-

 ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎನ್.ಪಿ.ಎಸ್ ನೌಕರರುಗಳಿಗೆ ಎನ್.ಪಿ.ಎಸ್ ಮೊತ್ತವನ್ನು ಕಟಾವಣೆ ಮಾಡಲು ದಿನಾಂಕ: 30.01.2014ರ ಸರ್ಕಾರದ ಆದೇಶದಲ್ಲಿ ಅವಕಾಶ ಕಲ್ಪಿಸಿರುತ್ತದೆ. ದಿನಾಂಕ: 01.04.2006 ನಂತರ ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆಗೆ ಸೇರಿರುವ ನೌಕರರುಗಳಿಗೆ ದಿನಾಂಕ: 21.02.2015 ರ ಸರ್ಕಾರದ ಸುತ್ತೋಲೆಯಂತೆ ಎನ್.ಪಿ.ಎಸ್ ಅನ್ನು ಅಳವಡಿಸಿಕೊಳ್ಳಬಹುದಾಗಿರುತ್ತದೆ. ಸ್ವಾಯತ್ತ ಸಂಸ್ಥೆಗಳಲ್ಲಿ ಎನ್.ಪಿ.ಎಸ್. ಅನುಷ್ಠಾನಗೊಳಿಸುವ ಸಂಬಂಧ ಎನ್.ಪಿ.ಎಸ್ ನೋಂದಣಿ ಕಾರ್ಯ ಹಾಗೂ ಎನ್.ಪಿ.ಎಸ್ ವಂತಿಗೆ upload ಮಾಡುವ ಪ್ರಕ್ರಿಯೆ ಬಗ್ಗೆ ಕಾರ್ಯಗಾರವನ್ನು/ತರಬೇತಿಯನ್ನು ಆಯೋಜಿಸಲಾಗಿರುತ್ತದೆ.

ಕನ್ನಡದಲ್ಲಿ ಎಸ್..ಟಿ.:-

CRA ರವರಿಂದ ನೌಕರರಿಗೆ ನೀಡುವ NPS Statement of transaction report, ಇದುವರೆವಿಗೂ ಇಂಗ್ಲೀಷ್ ಮತ್ತು ಹಿಂದಿ ಮಾತ್ರ ಭಾಷೆಯಲ್ಲಿ ಲಭ್ಯವಿರುತ್ತದೆ. ನವೆಂಬರ್-2020 ರಿಂದ ಸದರಿ ವರದಿಯು ಕರ್ನಾಟಕದ ಎನ್.ಪಿ.ಎಸ್ ನೌಕರರಿಗೆ ಕನ್ನಡದಲ್ಲಿಯೂ ಸಹ ಲಭ್ಯವಿರುತ್ತದೆ.

 

 

 

 

 

ಇತ್ತೀಚಿನ ನವೀಕರಣ​ : 12-10-2021 04:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಖಜಾನೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080