ಅಭಿಪ್ರಾಯ / ಸಲಹೆಗಳು

ನಾಗರಿಕ ಸನ್ನದು

 

ಖಜಾನೆ ಇಲಾಖೆಯ ಧ್ಯೇಯ ಮತ್ತು ಉದ್ದೇಶಗಳು:

 

 1. ಸಾರ್ವಜನಿಕ ಹಣಕಾಸು ನಿರ್ವಹಣೆಯಲ್ಲಿ ಸರ್ವತೋಮುಖ ಪಾರದರ್ಶಕತೆ  ಹಾಗೂ  ಸರ್ಕಾರದ ಹಣಕಾಸಿನ  ಅಭಿರಕ್ಷೆ.
 2. ಮಾಹಿತಿ ತಂತ್ರಜ್ಞಾನವನ್ನು ಬಳಸಿ ವ್ಯವಸ್ಥೆಯಲ್ಲಿನ ಕುಂದುಕೊರತೆಗಳನ್ನು ಯಶಸ್ವಿಯಾಗಿ ನಿವಾರಿಸುವುದು ಹಾಗೂ ಸಾರ್ವಜನಿಕ ಹಣಕಾಸಿನ ನಿರ್ವಹಣೆಯ ಮೂಲಕ ಉತ್ತಮ ಆಡಳಿತಕ್ಕೆ ಅವಶ್ಯಕ ನೆರವುನೀಡುವುದು.

 

ಖಜಾನೆಗಳ ಕೆಲಸ ಕಾರ್ಯಗಳು:

 

 1. ಹಲವಾರು ಸರ್ಕಾರಿ ಇಲಾಖೆಗಳು, ಜಿಲ್ಲಾ ಪಂಚಾಯತ್/ತಾಲ್ಲೂಕು ಪಂಚಾಯತ್ಗಳ ಕ್ಲೈಮುಗಳನ್ನು ಸಂಸ್ಕರಿಸಿ, ನಿಯಮಾನುಸಾರ ಮೌಲ್ಯ ಮಾಪನನಡೆಸಿ, ಬಿಲ್ಲುಗಳನ್ನು ಪಾವತಿಗಾಗಿ ತೀರ್ಣಗೊಳಿಸುವುದು.
 2. ರಾಜಸ್ವ ಜಮೆಗಳಿಗೆ ಸಂಬಂಧಿಸಿದಂತೆ ಚಲನ್ ಗಳನ್ನು ಮೇಲುಸಹಿಮಾಡುವುದು, ಲೆಕ್ಕಮಾಡುವುದು ಹಾಗೂ ಅವುಗಳನ್ನು  ಸಂಬಂಧಿಸಿದ  ಇಲಾಖೆಗಳಿಗೆ  ಹಾಗೂ  ಮಹಾಲೇಖಪಾಲರಿಗೆ ಕಳುಹಿಸುವುದು.
 3. ಠೇವಣಿಖಾತೆಗಳು, ವೈಯಕ್ತಿಕ ಠೇವಣಿ ಖಾತೆಗಳು, ಸ್ಥಳೀಯ ನಿಧಿ ಖಾತೆಗಳು ಹಾಗೂ ಇತರೆ ಠೇವಣಿಖಾತೆಗಳನ್ನು ನಿರ್ವಹಿಸುವುದು ಹಾಗೂ  ಇವುಗಳ ಲೆಕ್ಕಗಳನ್ನು ಮಹಾಲೇಖಪಾಲರಿಗೆ ಹಾಗೂ ಸಂಬಂಧಪಟ್ಟ ಆಡಳಿತಾಧಿಕಾರಿಗಳಿಗೆ ಕಳುಹಿಸುವುದು.
 4. ಉಳಿತಾಯ ಖಾತೆಗಳನ್ನು ನಿರ್ವಹಿಸುವುಸು ಹಾಗೂ  ಅವುಗಳ ಲೆಕ್ಕಗಳನ್ನು ಮಹಾಲೇಖಪಾಲರಿಗೆ ಕಳುಹಿಸುವುದು.
 5. ರೈಲ್ವೆ, ಸ್ವಾತಂತ್ರ್ಯಯೋಧರ ಹಾಗೂ ರಕ್ಷಣಾ ಪಿಂಚಣಿಗಳನ್ನು ಒಳಗೊಂಡಂತೆ ವಿವಿಧ ಬಗೆಯ ಪಿಂಚಣಿಗಳ ನಿರ್ವಹಣೆ ಹಾಗೂ  ಖಜಾನೆಕೌಂಟರ್  ಮತ್ತು ಸಾರ್ವಜನಿಕಕ್ಷೇತ್ರದ  ಬ್ಯಾಂಕುಗಳ ಮೂಲಕ ಮಾಹೆಯಾನ ಪಿಂಚಣಿಯನ್ನು ಪಾವತಿಸುವುದು.
 6. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಟಿ.ಸಿ.ಹೆಚ್ ಹಾಗೂ ಕೆ.ಪಿ.ಎಸ್.ಸಿ ಮುಂತಾದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು, ಚುನಾವಣಾ ಸಾಮಗ್ರಿಗಳು ಮತ್ತು ಸರ್ಕಾರದ  ಬೆಲೆಬಾಳುವ ವಸ್ತುಗಳ ಅಭಿರಕ್ಷೆ.
 7. ಸಾಮಾಜಿಕ ಭದ್ರತಾಯೋಜನೆಯಡಿ ಪಿಂಚಣಿಗಳಾದ ವೃದ್ದಾಪ್ಯವೇತನ, ಅಂಗವಿಕಲರ ವೇತನ ನಿರ್ಗತಿಕ ವಿಧವಾವೇತನ ಹಾಗೂ ಸಂಧ್ಯಾಸುರಕ್ಷಾ ಪಿಂಚಣಿಗಳನ್ನು ಎಂ.ಓ  ಮೂಲಕ  ಪ್ರತಿ ಮಾಹೆಪಾವತಿಸುವುದು.
 8. ಪ್ರತಿ ಮಾಹೆವೆಚ್ಚಗಳ ಕ್ರೋಢೀಕೃತ ಲೆಕ್ಕಗಳನ್ನು ತಯಾರಿಸಿ, ಅವುಗಳನ್ನು ಮಹಾಲೇಖಪಾಲರು ಜಿಲ್ಲಾಪಂಚಾಯತ್ ನ  ಮುಖ್ಯಲೆಕ್ಕಾಧಿಕಾರಿಗಳು  ಹಾಗೂ  ತಾಲ್ಲೂಕುಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ  ಸಂಬಂಧಿಸಿದ  ವೋಚರ್ಗಳೊಂದಿಗೆ ರವಾನಿಸುವುದು.
 9. ಸರ್ಕಾರಿ ನೌಕರರಿಗೆ ಹೆಚ್.ಡಿ.ಎಫ್.ಸಿ ಮೂಲಕ  ನೀಡುವ ಗೃಹಮುಂಗಡಸಾಲದ ಲೆಕ್ಕವನ್ನು ನಿರ್ವಹಿಸುವುದು  ಹಾಗೂ  ಅವುಗಳ ಲೆಕ್ಕಗಳನ್ನು ಮಹಾಲೇಖಪಾಲರಿಗೆ ರವಾನಿಸುವುದು.
 10. ನಿವೃತ್ತಿ ವೇತನಗಳ ವಿಳಂಬಪಾವತಿಗೆ ಸಂಬಂಧಿಸಿದಂತೆ ಬಡ್ಡಿಯನ್ನು ಪಾವತಿಸುವುದು.

 

ಸಂಹಿತೆ ಮತ್ತು ಪ್ರಕ್ರಿಯೆಗಳು:

 

 1. ಖಜಾನೆಗಳಲ್ಲಿ ನಡೆಯುವ ಸರ್ಕಾರದ ವಹಿವಾಟುಗಳನ್ನು ಕರ್ನಾಟಕ ಆರ್ಥಿಕ  ಸಂಹಿತೆ, ಕರ್ನಾಟಕ ಖಜಾನೆ  ಸಂಹಿತೆ, ಸಾದಿಲ್ವಾರು ವೆಚ್ಚ ಕೈಪಿಡಿ ಹಾಗೂ  ಬಡ್ಜೆಟ್ಮ್ಯಾನ್ಯುಯಲ್  ನಿಯಮಗಳಿಗೆ  ಒಳಪಟ್ಟಂತೆ ನಡೆಸಲಾಗುವುದು  ಹಾಗೂ  ಸಂವಿಧಾನದ  150ನೇ  ವಿಧಿಯಲ್ಲಿ ಪದತ್ತವಾಗಿರುವ ಅಧಿಕಾರದಂತೆ ಸಿ.ಎ.ಜಿ ರವರು ಲೆಕ್ಕಗಳ ನಿರ್ವಹಣೆ  ಹಾಗೂ ವರ್ಗೀಕರಣ, ಆಬ್ಜೆಕ್ಟ್ಶೀರ್ಷಿಕೆ ಹಂತದವರೆಗಿನ ಲೆಕ್ಕಶೀರ್ಷಿಕೆಗಳು ಪ್ರಾಥಮಿಕ  ಹಾಗೂ ನಂತರ ನಿರ್ವಹಿಸಬೇಕಾದ ಲೆಕ್ಕನಮೂನೆಗಳು, ಮಹಾಲೇಖಪಾಲರಿಗೆ ಲೆಕ್ಕಗಳನ್ನು ಸಲ್ಲಿಸುವ ನಮೂನೆಗಳನ್ನು ನಿಗಧಿಗೊಳಿಸಿರುತ್ತಾರೆ.
 2. ರಾಜ್ಯ ಸರ್ಕಾರದ  ಮತ್ತು ರಿಸರ್ವ್ಬ್ಯಾಂಕಿನ ನಡುವಿನ ಒಪ್ಪಂದದಂತೆ ಏಜೆನ್ಸಿ  ಬ್ಯಾಂಕುಗಳು ಖಜಾನೆಗಳ ನಗದು ವಹಿವಾಟನ್ನು ನಿರ್ವಹಿಸುತ್ತವೆ.

 

ಇತ್ತೀಚಿನ ನವೀಕರಣ​ : 07-10-2021 01:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಖಜಾನೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080