ಅಭಿಪ್ರಾಯ / ಸಲಹೆಗಳು

ಆರ್ಗಾನೋಗ್ರಾಮ್

 

ಖಜಾನೆ -2 ವಹಿವಾಟು ಪ್ರಕ್ರಿಯೆಗಳ ವ್ಯಾಪ್ತಿಯಲ್ಲಿ,ಕರ್ನಾಟಕ ರಾಜ್ಯಸರ್ಕಾರದ ಸಾಂಸ್ಥಿಕ ಸಂರಚನೆಯನ್ನು ಆರ್ಗನೋಗ್ರಾಮ್ ನಿರ್ವಹಿಸುತ್ತದೆ. ಕರ್ನಾಟಕ ರಾಜ್ಯ ಸರ್ಕಾರದ ಸಂಘಟನೆಯು ವಿವಿಧ ಆಡಳಿತ ಇಲಾಖೆಗಳು, ನಿರ್ದೇಶನಾಲಯಗಳು ಮತ್ತು ಕಚೇರಿಗಳ ಜಾಲ ಹಾಗೂ ಅವುಗಳ ನಡುವಿನ ಶ್ರೇಣೀಕೃತ ರಚನೆಯನ್ನುಒಳಗೊಂಡಿದೆ.

 

ಖಜಾನೆ- II ಆರ್ಗನೋಗ್ರಾಮ್‌ನ ಕಾರ್ಯಗಳು ಈ ಕೆಳಕಂಡಂತಿವೆ:

 

  1. ಇಲಾಖೆಯ ಅಧಿಕಾರ ಶ್ರೇಣಿ ಮೂಲಕ ಸಾಂಸ್ಥಿಕರಚನೆಯನ್ನು ವ್ಯಾಖ್ಯಾನಿಸಿ ಸಂರಚಿಸುವುದು.
  2. ಇಲಾಖೆಯೊಳಗಿನ ಹುದ್ದೆ-ಶ್ರೇಣಿಯ ಮೂಲಕ ಆಡಳಿತಾತ್ಮಕ ವಿನ್ಯಾಸದ ರಚನೆ.
  3. ಸಾಂಸ್ಥಿಕ ರಚನೆಯ ಘಟಕಗಳಿಗೆ ಮಾಸ್ಟರ್-ಡೇಟಾದ ವ್ಯಾಖ್ಯಾನ ಮತ್ತು ನಿರ್ವಹಣೆ.
  4. ಇಲಾಖಾ ಶ್ರೇಣಿಗಳ ಸೃಜನೆ ಮತ್ತು ಅವುಗಳ ನಿರ್ವಹಣೆ.
  5. ಹುದ್ದೆಗಳ ಶ್ರೇಣಿಗಳ ಸಂರಚನೆ.

 

ಇಲಾಖೆಗಳ ಒಳಗಿನ ಕ್ರಿಯಾತ್ಮಕ ರಚನೆ ಮತ್ತು ಆ ಮೂಲಕ ನಿರ್ದೇಶನಾಲಯ ಮತ್ತು ಕಚೇರಿಗಳು, ಆಂತರಿಕ ಹುದ್ದೆಗಳ ಶ್ರೇಣಿಯನ್ನು ಒಳಗೊಂಡಿವೆ. ಈ ಹುದ್ದೆಗಳಲ್ಲಿ ರಾಜ್ಯಸರ್ಕಾರದ ಅಧಿಕಾರಿಗಳು ಕೆಲಸನಿರ್ವಹಿಸುತ್ತಿದ್ದು, ಈ ಹುದ್ದೆಗಳು ಆಯಾ ಇಲಾಖೆಗಳು ನಡೆಸುವ ವಿವಿಧ ವ್ಯವಹಾರ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಪ್ರಾಧಿಕಾರ ಮತ್ತು ಕ್ರಿಯಾತ್ಮಕ ಹೊಣೆಗಾರಿಕೆಯನ್ನು ಸಹ ನಿರ್ಧರಿಸುತ್ತವೆ.

 

ಇಲಾಖೆಯಲ್ಲಿನ ಅಧಿಕಾರಿ ಶ್ರೇಣಿಯನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಲಾಗಿದೆ:

 

  1. ಕರ್ನಾಟಕ ಸರ್ಕಾರದ ಆಡಳಿತ ಸಚಿವಾಲಯಗಳ/ಇಲಾಖೆಗಳ ಜಾಲದ ಮೂಲಕ ವ್ಯವಹಾರ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ.
  2. ಇಲಾಖೆಯು, ಅದಕ್ಕೆ ನಿಯೋಜಿಸಲಾದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನೀತಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದ್ದು ಸದರಿ ನೀತಿಗಳನ್ನು ಅನುಷ್ಠಾನಗೊಳಿಸುವ ಮತ್ತು ಪರಿಶೀಲಿಸುವ ಹೊಣೆಗಾರಿಕೆಯನ್ನು ಸಹ ಹೊಂದಿರುತ್ತದೆ.
  3. ಸಚಿವರ ಸಚಿವಾಲಯಗಳಿಗೆ ನೇರವಾಗಿ ವರದಿಮಾಡುವ ಇಲಾಖೆಗಳನ್ನು ಆಡಳಿತ ಇಲಾಖೆಗಳೆಂದು ಕರೆಯಲಾಗುತ್ತದೆ.
  4. ಆಡಳಿತ ಇಲಾಖೆಯು ಸರ್ಕಾರದ ಕಾರ್ಯದರ್ಶಿಗಳ ನೇತೃತ್ವ ಹೊಂದಿರುತ್ತದೆ. ಅವರು ಇಲಾಖೆಯ ಆಡಳಿತ ಮುಖ್ಯಸ್ಥರಾಗಿ ಮತ್ತುಇಲಾಖೆಯೊಳಗಿನ ನೀತಿ ಮತ್ತುಆಡಳಿತದ ಎಲ್ಲಾ ವಿಷಯಗಳ ಕುರಿತು ಸಚಿವರ ಸಚಿವಾಲಯದ ಪ್ರಧಾನ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ.
  5. ಆಡಳಿತ ಇಲಾಖೆಯ ಕಾರ್ಯನಿರ್ವಹಣೆಯನ್ನು ಲೈನ್ಇಲಾಖೆಗಳನ್ನಾಗಿ ವಿಂಗಡಿಸಲಾಗಿದೆ.
  6. ಪ್ರತಿಯೊಂದು ಲೈನ್ಇಲಾಖೆಯು ಅದರಡಿಯಲ್ಲಿ ಒಂದು ಅಥವಾ ಹೆಚ್ಚಿನ ಕಚೇರಿಯನ್ನು ಹೊಂದಿರಬಹುದು. ಕಛೇರಿಗಳು ತಮ್ಮಇಲಾಖೆಯಿಂದ ನಿಗದಿಪಡಿಸಲಾದ ನೀತಿಗಳ ಅನುಷ್ಠಾನದಲ್ಲಿ ಅಗತ್ಯವಿರುವ ಕಾರ್ಯಕಾರಿ ನಿರ್ದೇಶನವನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತವೆ.
  7. ಎಲ್ಲಾ ಕಚೇರಿಗಳು ನೇರವಾಗಿ ಆಡಳಿತ ಇಲಾಖೆ ಅಥವಾ ಲೈನ್ಇಲಾಖೆಗಳಿಗೆ ವರದಿಮಾಡುತ್ತವೆ. ಈ ಕಚೇರಿಗಳನ್ನು ರಾಜ್ಯ, ವಿಭಾಗೀಯ/ಪ್ರಾದೇಶಿಕ, ಜಿಲ್ಲೆ, ಉಪವಿಭಾಗ, ತಾಲೂಕು, ಹೋಬಳಿ ಮತ್ತು ಗ್ರಾಮ ಎಂದು ವರ್ಗೀಕರಿಸಲಾಗುತ್ತದೆ ಮತ್ತು ಅದೇ ಅಧಿಕಾರ ಕ್ರಮಾನುಗತಕ್ರಮದಲ್ಲಿರುತ್ತವೆ.
  8. ಹುದ್ದೆಯು ಕರ್ತವ್ಯನಿರ್ವಹಿಸುವ ಸ್ಥಾನಮಾನವಾಗಿದ್ದು ಅದರಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹುದ್ದೆಯನ್ನು ಇಲಾಖೆ / ಕಚೇರಿಯೊಂದಿಗೆ ಮ್ಯಾಪ್ ಮಾಡಲಾಗಿದೆ. ನಿಯೋಜಿಸಲಾದ ಹುದ್ದೆಯನ್ನು ಆಧರಿಸಿ ಪ್ರತಿಯೊಬ್ಬ ಅಧಿಕಾರಿಯು ಖಜಾನೆ -2 ರಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
  9. ಪ್ರತಿಯೊಂದು ಕಚೇರಿಯೂ ತನ್ನದೇ ಆದ ಆಂತರಿಕ ಹುದ್ದೆಗಳ ಶ್ರೇಣಿಯನ್ನು ಹೊಂದಿರುತ್ತದೆ. ಅದೇ ಮೇಲ್ವಿಚಾರಕರಿಗೆ ವರದಿಮಾಡುವ ಹುದ್ದೆಯು ಅದೇ ಶ್ರೇಣಿಯಲ್ಲಿರುತ್ತದೆ.ಖಜಾನೆ2 ರಲ್ಲಿ,ಹುದ್ದೆಯಲ್ಲಿನ ಅಧಿಕಾರಿಗೆ ನಿಯೋಜಿತ ಪಾತ್ರಗಳು ಅವರು ನಿರ್ವಹಿಸಬಹುದಾದ ಚಟುವಟಿಕೆಗಳನ್ನು ನಿರ್ಧರಿಸುತ್ತವೆ.
  10. ಕೇಡರ್ ಎಂದರೆ ಹುದ್ದೆಗಳಸಮೂಹ. ಅಧಿಕಾರಿಗಳು ಸೇವೆಗೆ ಸೇರುವ ಸಮಯದಲ್ಲಿಇದನ್ನುನಿರ್ಧರಿಸಲಾಗುತ್ತದೆ.ಎಚ್ ಆರ್ ಎಂ ಸ್ ನಿಂದ ಕೇಡರ್ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.ಒಂದು ಕಚೇರಿಯಲ್ಲಿ ನಿರ್ಧಿಷ್ಟ ಹುದ್ದೆಯನ್ನುಆಯಾ ಹುದ್ದೆದಾರರು ನಿರ್ವಹಿಸುತ್ತಾರೆ.

 

 

ಇತ್ತೀಚಿನ ನವೀಕರಣ​ : 12-10-2021 10:48 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಖಜಾನೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080