ಅಭಿಪ್ರಾಯ / ಸಲಹೆಗಳು

ಖಜಾನೆಯ ಇತಿಹಾಸ

 

 ಖಜಾನೆಗಳ ಇತಿಹಾಸ

 

ನಾಗರೀಕತೆ ಪ್ರಾರಂಭವಾಗಿ ಅರಸೊತ್ತಿಗೆಯ ಸಮಯದಿಂದಲೇ ಖಜಾನೆ (ಕೋಶ, ಕೋಶಾಗಾರ)ಗಳು ಅಸ್ತಿತ್ವವು ಪ್ರಾರಂಭವಾಗಿದ್ದು, ಈ ವ್ಯವಸ್ಥೆಯು ಇಂದಿನವರೆಗೆ ಅವಾಹ್ಯತವಾಗಿ ಮುಂದುವರೆಯುತ್ತಾ ಬಂದಿದೆ.

 

ಸ್ವಾತಂತ್ರ್ಯ ಪೂರ್ವ ಹಾಗೂ       ಸ್ವಾತಂತ್ರ್ಯ ನಂತರವು ರಾಜ್ಯದಲ್ಲಿ ಖಜಾನೆಗಳು ಕಂದಾಯ ಇಲಾಖೆಯಡಿ ಕೆಲಸ ನಿರ್ವಹಿಸುತ್ತಿದ್ದವು. ವಿಭಾಗಾಧಿಕಾರಿಗಳು ಆಯಾ ವಿಭಾಗದಲ್ಲಿ ಖಜಾನೆಗಳ ಮುಖ್ಯನಿಯಂತ್ರಣಾಧಿಕಾರಿಗಳಾಗಿದ್ದು, ಜಿಲ್ಲಾಧಿಕಾರಿಗಳು/ತಹಸೀಲ್ದಾರರು ಜಿಲ್ಲಾ ಮತ್ತು ತಾಲ್ಲೂಕಗಳ ಕಾರ್ಯವ್ಯಾಪ್ತಿಯಲ್ಲಿ ಖಜಾನೆಗಳ ಆಡಳಿತಾಧಿಕಾರಿಗಳಾಗಿದ್ದು. ಖಜಾನೆ ವಿಭಾಗದ ಅಧಿಕಾರಿಗಳು ಖಜಾನೆಗಳ ಕಾರ್ಯಕಾರಿ ಮುಖ್ಯಸ್ಥರಾಗಿದ್ದರು.

 

ಸ್ವಾತಂತ್ರ್ಯ ನಂತರ ದೇಶದಲ್ಲಿ ಕೈಗೊಂಡ ಅಭೂತಪೂರ್ವ ಅಭಿವೃದ್ಧಿ ಚಟುವಟಿಕೆಗಳಿಂದಾಗಿ, ಖಜಾನೆಗಳಲ್ಲಿನ ವಹಿವಾಟುಗಳಲ್ಲಿ ಗಣನೀಯ ಹೆಚ್ಚಳವಾಗಿ., ಖಜಾನೆಗಳ ಕೆಲಸದ ಮೇಲ್ವಿಚಾರಣೆಯನ್ನು ಹೆಚ್ಚಿನ ಹೊಣೆಗಾರಿಕೆಯಿಂದ ನಿರ್ವಹಿಸಲು ಹಾಗೂ  ಅವುಗಳ ಕೆಲಸದಲ್ಲಿ ಏಕರೂಪತೆ ಹಾಗೂ ಗರಿಷ್ಠ ದಕ್ಷತೆಯನ್ನು ಖಾತ್ರಿಪಡಿಸಲು ಸರ್ಕಾರವು ಬಯಸಿತು. ಇದಕ್ಕಾಗಿ ಸರ್ಕಾರಿ ಆದೇಶ ಸಂಖ್ಯೆ: ಎಫ್1 (ಆರ್) ) 4684-4704/ಬಿ & ಟಿ 35-53-4 ದಿನಾಂಕ 21.11.1953 ರಲ್ಲಿ   ರಾಜ್ಯ ಖಜಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲ್ಲಾ ಸಿಬ್ಬಂದಿ ಅಧಿಕಾರಿಗಳ ಪ್ರತ್ಯೇಕ ಸಾಮಾನ್ಯ ಖಜಾನೆ ಕೇಡರ್ ಸೃಜಿಸಿತು. ಸರ್ಕಾರಿ ಆದೇಶ ಸಂಖ್ಯೆ: ಎಫ್ ಡಿ 128 ಆರ್ ಟಿ ಇ 61 ದಿನಾಂಕ 11.10.1963ರಲ್ಲಿ  ರಲ್ಲಿ  ಖಜಾನೆ ಇಲಾಖೆಗೆ ಪ್ರತ್ಯೆಕವಾಗಿ ಇಲಾಖಾ ಮುಖ್ಯಸ್ಥರ ಮಟ್ಟದ ಹುದ್ದೆಯನ್ನು ಮಂಜೂರು ಮಾಡಿ, ಸದರಿ ಹುದ್ದೆಯನ್ನು ಖಜಾನೆ ನಿರ್ದೇಶಕರೆಂದು ಪದನಾಮೀಕರಿಸ ಲಾಯಿತು. ಸದರಿ ಸಮಯದಲ್ಲಿ 19 ಜಿಲ್ಲಾ ಖಜಾನೆಗಳು 165 ಉಪಖಜಾನೆಗಳು ಕಾರ್ಯ ನಿರ್ವಹಿಸುತ್ತಿದ್ದವು.

 

ದಿನಾಂಕ 01.10.1964 ರಂದು ಖಜಾನೆ ನಿರ್ದೇಶಕರು ಆಡಳಿತವನ್ನು ವಹಿಸಿಕೊಂಡ ನಂತರ ವಿಭಾಗಾಧಿಕಾರಿಗಳ ಆಡಳಿತ ನಿಯಂತ್ರಣದಿಂದ ಖಜಾನೆಗಳು ಬೇರ್ಪಟ್ಟು ಸರ್ಕಾರದ ಆರ್ಥಿಕ ಇಲಾಖೆಯಡಿ ಸ್ವತಂತ್ರ ಇಲಾಖೆಯಾಗಿ ಕಾರ್ಯಾರಂಭ ಮಾಡಿದವು. ಆದಾಗ್ಯೂ ನಿಯಮಗಳು/ಸಂಹಿತೆಗಳು ತಿದ್ದುಪಡಿಯಾಗುವವರೆಗೆ ಆಗಿನ  ಆಡಳಿತಾತ್ಮಕ ವ್ಯವಸ್ಥೆ ಕೆಲಕಾಲ ಮುಂದುವರೆದಿದ್ದು, ಹಂತ ಹಂತವಾಗಿ ರಾಜಸ್ವ ಇಲಾಖೆಯ ಅಧಿಕಾರಿಗಳ ಆಡಳಿತ ನಿಯಂತ್ರಣದಿಂದ ಖಜಾನೆಗಳ ಆಡಳಿತವನ್ನು  ಮುಕ್ತಗೊಳಿಸಿ ಕೊನೆಯದಾಗಿ ಸರ್ಕಾರಿ ಆದೇಶ ಸಂಖ್ಯೆ ಎಫ್ ಡಿ 07 ಟಿ ಟಿ ಸಿ 83(1) ದಿನಾಂಕ 16.08.1984 ರಂತೆ ಉಪ ಖಜಾನೆಗಳ ಆಡಳಿತವನ್ನು ದಿನಾಂಕ 07.10.1983 ರಿಂದ ತಹಸೀಲ್ದಾರರಿಂದ ಉಪ ಖಜಾನಾಧಿಕಾರಿಗಳಿಗೆ ವರ್ಗಾಯಿಸಲಾಯಿತು..

 

1953ರ ಪೂರ್ವ ಬೆಂಗಳೂರು ನಗರದಲ್ಲಿ 1)ಜಿಲ್ಲಾ ಖಜಾನೆ 2)ರಾಜ್ಯ ಹುಜೂರು ಖಜಾನೆ 3)ಸಿವಿಲ್ ಸ್ಟೇಷನ್ ಖಜಾನೆ 4)ಬೆಂಗಳೂರು ಉತ್ತರ ತಾಲ್ಲೂಕು 5)ಬೆಂಗಳೂರು ದಕ್ಷಿಣ ತಾಲ್ಲೂಕು ಖಜಾನೆ ಒಟ್ಟು ಐದು ಖಜಾನೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಈ ಖಜಾನೆಗಳು ವಿವಿಧ ಬ್ಯಾಂಕುಗಳ ಮೂಲಕ ವ್ಯವಹರಿಸುತ್ತಿದ್ದವು. ಬೆಂಗಳೂರಿನಲ್ಲಿ ಆರ್‌ಬಿಐ ಶಾಖೆ ಪ್ರಾರಂಭವಾದ ನಂತರ ಈ ಎಲ್ಲಾ ಖಜಾನೆಗಳ ವ್ಯವಹಾರಗಳನ್ನು ಆರ್‌ಬಿಐ ವ್ಯಾಪ್ತಿಗೆ ತರುವ ಉದ್ದೇಶದಿಂದ ಬೆಂಗಳೂರಿನಲ್ಲಿನ ಖಜಾನೆಗಳ ಪುನರ್ಘಟಿಸುವ ಅಗತ್ಯತೆಯಿಂದಾಗಿ ದಿನಾಂಕ 01.07.1953 ರಿಂದ  ಜಿಲ್ಲಾ ಖಜಾನೆ, ಸಿವಿಲ್ ಸ್ಟೇಷನ್ ಖಜಾನೆ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು ಖಜಾನೆಗಳನ್ನು ಮುಕ್ತಾಯಗೊಳಿಸಿ ಇವುಗಳ ವ್ಯವಹಾರಗಳನ್ನು ರಾಜ್ಯ ಹುಜೂರು ಖಜಾನೆ ಹಾಗೂ ಬೆಂಗಳೂರು ಉತ್ತರ ತಾಲ್ಲೂಕು ಖಜಾನೆಗಳಿಗೆ ಹಂಚಲಾಯಿತು. ಬೆಂಗಳೂರು ಉತ್ತರ ತಾಲ್ಲೂಕು ಖಜಾನೆಯ ನಾನ್ ಬ್ಯಾಂಕಿಂಗ್ ಖಜಾನೆಯನ್ನಾಗಿ ಉಳಿಸಿಕೊಂಡು ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕುಗಳ ವ್ಯವಹಾರಗಳನ್ನು ನಿರ್ವಹಿಸಲಾಗುತ್ತಿತ್ತು. ಖಜಾನೆಗಳು ಕರೆನ್ಸಿ ಚೆಸ್ಟ್/ಸಾಮಾನ್ಯ ಶಿಲ್ಕಿನೊಂದಿಗೆ ನಗದು ವಹಿವಾಟುಗಳನ್ನು ತಮ್ಮಲ್ಲೇ ನಡೆಸುತ್ತಿದ್ದು, ಇವುಗಳನ್ನು ಹಂತ ಹಂತವಾಗಿ ಬ್ಯಾಂಕಿಂಗ್ ಖಜಾನೆಗಳನ್ನಾಗಿ ಪರಿವರ್ತಿಸಿ ನಗದು ವಹಿವಾಟುಗಳನ್ನು ಏಜೆನ್ಸಿ ಬ್ಯಾಂಕುಗಳಿಗೆ ವರ್ಗಾಯಿಸಲಾಯಿತು.

 

1956ರಲ್ಲಿ ರಾಜ್ಯ ಪುನರ್ವಿಂಗಡನೆಯಾದ ನಂತರ ರಾಜ್ಯ ಹುಜೂರು ಖಜಾನೆ ಹಾಗೂ ಆರ್‌ಬಿಐ ನಲ್ಲಿ ಕೆಲಸದ ಒತ್ತಡದಲ್ಲಿ ಹೆಚ್ಚಳವಾದ್ದರಿಂದ, ದಕ್ಷಿಣ ಭಾರತದಲ್ಲಿ ರಾಜ್ಯಗಳಲ್ಲಿನ ಖಜಾನೆಗಳ ಸಂಘಟನೆಗಳ ಮಾದರಿಯಲ್ಲಿ ಮೇ 1970ರಲ್ಲಿ ರಾಜ್ಯ ಹುಜೂರು ಖಜಾನೆಯನ್ನು ಪುನರ್ಸಂಘಟಿಸಲಾಯಿತು. ಇದರಂತೆ ರಾಜ್ಯ ಹುಜೂರು ಖಜಾನೆಯ ಕೆಲಸದಲ್ಲಿನ ಒಂದು ಭಾಗವನ್ನು ಅಂದರೆ ಠೇವಣಿ ಖಾತೆಗಳು,ಸ್ಥಳೀಯ ನಿಧಿಗಳು, ಕೇಂದ್ರ ಜಮೆ ಹಾಗೂ ಮರು ಪಾವತಿಗಳು ಇಲಾಖಾ ಜಮೆಗಳು, ನ್ಯಾಯಾಲಯ ಠೇವಣಿಗಳು, ಲೋಕೋಪಯೋಗಿ ಮತ್ತು ಅರಣ್ಯ ಮುಂತಾದ ಚೆಕ್ ಸೆಳೆಯುವ ಠೇವಣಿಗಳು, ಪಿಂಚಣಿಗಳು, ಉಳಿತಾಯ ಖಾತೆಗಳು, ಉಪ ಖಜಾನೆಗಳ ಆಡಳಿತ ಹಾಗೂ ಲೆಕ್ಕಗಳು ಇವುಗಳನ್ನು ನೂತನವಾಗಿ ಸ್ಥಾಪಿಸಲಾದ ಬೆಂಗಳೂರು ಜಿಲ್ಲಾ ಖಜಾನೆಗೆ ವರ್ಗಾಯಿಸಲಾಯಿತು. ಮುದ್ರಾಂಕಗಳನ್ನು ಹಾಗೂ ಭದ್ರಕೊಠಡಿಯನ್ನು ನಿರ್ವಹಿಸಲು ಪ್ರತ್ಯೇಕವಾಗಿ ಮುದ್ರಾಂಕ ಭಂಡಾರವನ್ನು ತೆರೆಯಲಾಯಿತು.

 

ದಿನಾಂಕ 01.08.1986 ರಿಂದ ಬೆಂಗಳೂರು ಜಿಲ್ಲೆಯನ್ನು ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಾಗಿ ವಿಭಜಿಸಿದಾಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಖಜಾನೆಯನ್ನು ಸೃಜಿಸಿ ಅದರ ಅಧೀನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿನ ಉಪ ಖಜಾನೆಗಳನ್ನು ತರಲಾಯಿತು.

 

ಬೆಂಗಳೂರಿನಲ್ಲಿ ಪಿಂಚಣಿಗಳ ಪಾವತಿಗಳನ್ನು ನಿರ್ವಹಿಸಲು ದಿನಾಂಕ 12.11.1983 ರಲ್ಲಿ ಪಿಂಚಣಿ ಬಟವಾಡೆ ಖಜಾನೆಯನ್ನು ಪ್ರಾರಂಬಿಸಲಾಗಿತ್ತು. ರಾಜ್ಯದ ಎಲ್ಲಾ ಪಿಂಚಣಿಗಳ ಪಾವತಿಗಳನ್ನು ಹಾಗೂ ಮೇಲ್ವಿಚಾರಣೆ ನಡೆಸಲು ಫೆಬ್ರವರಿ 2021 ರಲ್ಲಿ ಅದನ್ನು ರಾಜ್ಯ ಪಿಂಚಣಿ ಪಾವತಿ ಹಾಗೂ ನಿರ್ವಹಣಾ ಖಜಾನೆಯನ್ನಾಗಿ ಪರಿವರ್ತಿಸಲಾಗಿದೆ. ರಾಜ್ಯದಲ್ಲಿನ ಇ ಸಂದಾಯಗಳ ಲೆಕ್ಕಗಳನ್ನು ನಿರ್ವಹಿಸಲು ಬೆಂಗಳೂರಿನಲ್ಲಿ ಅಕ್ಟೋಬರ್ 2016ರಲ್ಲಿ ರಾಜ್ಯ ಸೈಬರ್ ಖಜಾನೆಯನ್ನು ಪ್ರಾರಂಭಿಸಲಾಗಿದೆ. ಹುಬ್ಬಳ್ಳಿ ತಾಲ್ಲೂಕು ಕೇಂದ್ರದಲ್ಲಿ ಅಪರ ಜಿಲ್ಲಾಖಜಾನೆಯನ್ನು ನಿರ್ವಹಿಸಲಾಗುತ್ತಿದೆ. ಉಳಿದಂತೆ ನೂತನವಾಗಿ ಜಿಲ್ಲೆ/ ತಾಲ್ಲೂಕುಗಳು ಸೃಜನೆಯಾದಾಗ  ಆಯಾ ಕೇಂದ್ರಗಳಲ್ಲಿ ಜಿಲ್ಲಾ/ಉಪಖಜಾನೆಗಳನ್ನು ಪ್ರಾರಂಭಿಸಲಾಗಿದೆ.

   

2001-04ನೇ ಸಾಲಿನ ಅವಧಿಯಲ್ಲಿ ಖಜಾನೆ ಯೋಜನೆಯ ಮೂಲಕ ಖಜಾನೆಗಳ ಅಂತರಿಕ ಗಣಕೀಕರಣವನ್ನು ಸಾಧಿಸಲಾಗಿತ್ತು. ಇದಕ್ಕಾಗಿ ಖಜಾನೆ ಗಣಕ ಜಾಲ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಯಿತು.ರಾಜ್ಯ ಸರ್ಕಾರದ ಐ ಎಫ್ ಎಂ ಎಸ್ ಯೋಜನೆಯಾದ ಖಜಾನೆ 2 ನ್ನು 2011 ರಿಂದ ಅಭಿವೃದ್ಧಿಗೊಳಿಸಲಾಗುತ್ತಿದ್ದು 2016-17 ನೇ ಸಾಲಿನಿಂದ ಹಂತಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಅನುಷ್ಠಾನ ಹಾಗೂ ಮೇಲ್ವಚಾರಣೆ ನಡೆಸಲು ಇಲಾಖಾ ಮುಖ್ಯಸ್ಥರನ್ನಾಗಿ ಖಜಾನೆ ಆಯುಕ್ತರನ್ನು ನಿಯೋಜಿಸಲಾಗಿದೆ.

 

ದಿನಾಂಕ 30.07.2020 ರಿಂದ ಪಿಂಚಣಿ, ಸಣ್ಣ ಉಳಿತಾಯ  ಮತ್ತು ಆಸ್ತಿ ಋಣ ನಿರ್ವಹಣೆ ನಿರ್ದೇಶನಾಲಯವನ್ನು ಖಜಾನೆ ಅಯುಕ್ತಾಲಯದೊಂದಿಗೆ ವಿಲೀನಗೊಳಿಸಲಾಗಿದೆ.

 

 

ಇತ್ತೀಚಿನ ನವೀಕರಣ​ : 20-01-2022 04:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಖಜಾನೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080