ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಪೀಠಿಕೆ:

 

       ಖಜಾನೆಗಳು ಸರ್ಕಾರದ ಹಣಕಾಸು ಪದ್ಧತಿಯಲ್ಲಿ ಪ್ರಾಥಮಿಕ ಘಟಕಗಳಾಗಿದ್ದು, ಸಾರ್ವಜನಿಕ ಲೆಕ್ಕಗಳು ಈ ಘಟಕಗಳಿಂದ ಪ್ರಾರಂಭವಾಗುತ್ತವೆ. ಈ ಘಟಕಗಳು ಸರ್ಕಾರದ ಹಣಕಾಸು ವಹಿವಾಟಿನ ಜಮಾ ಹಾಗೂ ವೆಚ್ಚವನ್ನು ನಿರ್ವಹಿಸಿ ಅವುಗಳ ಲೆಕ್ಕಗಳನ್ನು ಸಲ್ಲಿಸುವ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿವೆ. ಖಜಾನೆ ಇಲಾಖೆಯು ಸರ್ಕಾರದ ಸಚಿವಾಲಯದ ಆರ್ಥಿಕ ಇಲಾಖೆಯ ಆಡಳಿತ ಅಧೀನಕ್ಕೆ ಒಳಪಟ್ಟ ಇಲಾಖೆಯಾಗಿದ್ದು, ನಿರ್ದೇಶಕರು ಖಜಾನೆ ಇಲಾಖೆಯ ಮುಖ್ಯ ನಿಯಂತ್ರಣಾಧಿಕಾರಿಗಳಾಗಿರುತ್ತಾರೆ. ಸದರಿ ನಿರ್ದೇಶಕರ ಹುದ್ದೆಯನ್ನು ಆಯುಕ್ತರ ಹುದ್ದೆಗೆ ಮೇಲ್ದರ್ಜೆಗೇರಿಸಲಾಗಿದೆ.

 

ಖಜಾನೆ-2 ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ಸರ್ಕಾರದ ಆರ್ಥಿಕ ಇಲಾಖೆಯಲ್ಲಿ ಯೋಜನಾ ನಿರ್ದೇಶಕರ ಹುದ್ದೆ ಸೃಜನೆಯಾಗಿರುತ್ತದೆ.

 

ಕೋವಿಡ್ ಸಾಂಕ್ರಮಿಕ ರೋಗ ಪ್ರಸರಣಾ ಅವಧಿಯಲ್ಲಿ ಖಜಾನೆ ಇಲಾಖೆಯನ್ನು ಅವಶ್ಯಕ ಸೇವಾ ಇಲಾಖೆಯೆಂದು ಘೋಷಿಸಲಾಗಿದೆ.

 

ಖಜಾನೆಗಳ ಸಂಘಟನೆ:

 

        ಖಜಾನೆ ಮುಖ್ಯಸ್ಥರ ನಿಯಂತ್ರಣಕ್ಕೆ ಒಳಪಟ್ಟು ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಜಿಲ್ಲಾ ಖಜಾನೆ, ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲಿ ಒಂದು ಉಪ ಖಜಾನೆ ಹಾಗೂ ಸಾರ್ವಜನಿಕರ ಹೆಚ್ಚಿನ ಸೌಲಭ್ಯಕ್ಕಾಗಿ ಕೆಲವು ತಾಲ್ಲೂಕು ಕೇಂದ್ರದ ಹೊರಗೆ ಇರುವ ಹೋಬಳಿ ಕೇಂದ್ರಗಳಲ್ಲಿ ಒಂದೊಂದು ಪೂರ್ಣ ಪ್ರಮಾಣದ ಉಪ ಖಜಾನೆಗಳು ಕಾರ್ಯನಿರ್ವಹಿಸುತ್ತಿವೆ. ದಿನಾಂಕ04.2020 ರಿಂದ 27 ನೂತನ ತಾಲ್ಲೂಕುಗಳಲ್ಲಿ ಹೊಸದಾಗಿ ಉಪ ಖಜಾನೆಗಳು ಕಾರ್ಯಾರಂಭ ಮಾಡಿರುತ್ತವೆ.

 

ಬೆಂಗಳೂರು ನಗರದಲ್ಲಿ ಬೆಂಗಳೂರು ನಗರ ಜಿಲ್ಲಾ ಖಜಾನೆ ಅಲ್ಲದೆ, ಈ ಕೆಳಕಂಡ ಜಿಲ್ಲಾ ಮಟ್ಟದ ವಿಶೇಷ ಖಜಾನೆಗಳು ಕಾರ್ಯನಿರ್ವಹಿಸುತ್ತಿವೆ.

1. ರಾಜ್ಯ ಹುಜೂರ್ ಖಜಾನೆ

2. ಕೇಂದ್ರ ಮುದ್ರಾಂಕ ಭಂಡಾರ

3. ರಾಜ್ಯ ಸೈಬರ್ ಖಜಾನೆ

4. ರಾಜ್ಯ ಪಿಂಚಣಿ ಪಾವತಿ ಹಾಗೂ ನಿರ್ವಹಣಾ ಖಜಾನೆ

 

ಹೆಚ್ಚಿನ ಸಂಖ್ಯೆಯ ವಹಿವಾಟುಗಳಿಂದಾಗಿ ಹುಬ್ಬಳ್ಳಿ ಖಜಾನೆಯನ್ನು ಧಾರವಾಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಖಜಾನೆಯಾಗಿ ಕಾರ್ಯನಿರ್ವಹಿಸುತ್ತಿದೆ.

 

ರಾಜ್ಯ ಹುಜೂರ್ ಖಜಾನೆಯು ರಾಜ್ಯದ ಬಹು ದೊಡ್ಡ ಖಜಾನೆಯಾಗಿದ್ದು, ಬೆಂಗಳೂರುನಗರದ ಎಲ್ಲಾ ಸಚಿವಾಲಯಗಳು, ಇಲಾಖಾ ಮುಖ್ಯಸ್ಥರು, ನ್ಯಾಯಾಲಯಗಳು ಮತ್ತು ಇತರೆ ಡ್ರಾಯಿಂಗ್ ಅಧಿಕಾರಿಗಳಿಗೆ ಸಂಬಂಧಿಸಿದಂತೆ ವಿವಿಧ ಬಿಲ್ಲುಗಳು ಹಾಗೂ ಅನುದಾನಿತ ಸಂಸ್ಥೆಗಳ ಬಿಲ್ಲುಗಳ ಪಾವತಿ ಕಾರ್ಯವನ್ನು ನಿರ್ವಹಿಸುತ್ತದೆ.

 

ರಾಜ್ಯದ ಎಲ್ಲಾ ಖಜಾನೆಗಳಿಗೆ ಅವಶ್ಯವಿರುವ ರಾಜಸ್ವ ಮುದ್ರಾಂಕ, ಲೇಖನ ಸಾಮಗ್ರಿಗಳಾದ ಚೆಕ್ಕುಗಳ ಸಂಗ್ರಹಣೆ ಹಾಗೂ ವಿತರಣೆಯ ಕೆಲಸವನ್ನು ಕೇಂದ್ರ ಮುದ್ರಾಂಕ ಭಂಡಾರ ನಿರ್ವಹಿಸುತ್ತಿದೆ. ಇದಲ್ಲದೆ ಸರ್ಕಾರದ ವಿವಿಧ ಇಲಾಖೆಗಳ ಅಮೂಲ್ಯವಾದ ವಸ್ತುಗಳನ್ನು/ದಾಖಲೆಗಳನ್ನು, ನಗದು ಪಟ್ಟಿಗೆ, ನ್ಯಾಯಾಲಯಗಳಸ್ವತ್ತಿನ ಪೆಟ್ಟಿಗೆ ಮುಂತಾದವುಗಳನ್ನು ಹಾಗೂ ವಿವಿಧ ಪರೀಕ್ಷೆಗಳ ಗೌಪ್ಯ ಸಾಮಗ್ರಿಗಳನ್ನು ಅಭಿರಕ್ಷೆಯ ಕಾರ್ಯವನ್ನು ಸಹ ನಿರ್ವಹಿಸುತ್ತಿದೆ.

 

ರಾಜ್ಯ ಸೈಬರ್ ಖಜಾನೆಯು ರಾಜ್ಯಾದ್ಯಂತ ಎಲ್ಲಾ ಖಜಾನೆಗಳ ಇ-ಸಂದಾಯಗಳ ಲೆಕ್ಕವನ್ನು ಕೇಂದ್ರ್ರೀಕೃತವಾಗಿ ನಿರ್ವಹಿಸಿ ಮಹಾಲೇಖಪಾಲರಿಗೆ ಸಲ್ಲಿಸುತ್ತಿದೆ.

 

ರಾಜ್ಯ ಪಿಂಚಣಿ ಪಾವತಿ ಹಾಗೂ ನಿರ್ವಹಣಾ ಖಜಾನೆಯು ನಾಗರೀಕ ಪಿಂಚಣಿಗಳ ಪಾವತಿ ಹಾಗೂ ಸಮನ್ವಯೀಕರಣವನ್ನು ನಿರ್ವಹಿಸುತ್ತದೆ.

 

ಮೇಲ್ಕಂಡ ವಿವರಗಳಂತೆ ರಾಜ್ಯದಲ್ಲಿ ಒಟ್ಟು 35 ಜಿಲ್ಲಾ ಖಜಾನೆಗಳು ಹಾಗೂ 208 ಉಪ ಖಜಾನೆಗಳು ಕಾರ್ಯನಿರ್ವಹಿಸುತ್ತಿವೆ.

 

ಆಯುಕ್ತಾಲಯದಲ್ಲಿ ಇಬ್ಬರು ಹೆಚ್ಚುವರಿ ನಿರ್ದೇಶಕರು ಹಾಗೂ ಮೂವರು ಜಂಟಿ ನಿರ್ದೇಶಕರು, ಆಯುಕ್ತರಿಗೆ ಆಡಳಿತದಲ್ಲಿ ಸಹಾಯಕರಾಗಿರುತ್ತಾರೆ. ಇವರಲ್ಲಿ ಓರ್ವ ಹೆಚ್ಚುವರಿ ನಿರ್ದೇಶಕರು, ಖಜಾನೆ-2 ಕಾರ್ಯಕಾರಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಓರ್ವ ಜಂಟಿ ನಿರ್ದೇಶಕರು ಎನ್.ಎಂ.ಸಿ ಹಾಗೂ ಓರ್ವ ಜಂಟಿ ನಿರ್ದೇಶಕರು ಎನ್.ಪಿ.ಎಸ್ ಘಟಕದ ನಿರ್ವಾಹಕರಾಗಿರುತ್ತಾರೆ. ಇದಲ್ಲದೇ ಖಜಾನೆ ಆಯುಕ್ತಾಲಯದಲ್ಲಿ 1 ಉಪ ನಿರ್ದೇಶಕರು, 10 ಸಹಾಯಕ ನಿರ್ದೇಶಕರು, 27 ಸಹಾಯಕ ಖಜಾನಾಧಿಕಾರಿಗಳ ಹುದ್ದೆಗಳು ಹಾಗೂ ಇತರೆ ಸಮೂಹ ಸಿ & ಡಿ ಹುದ್ದೆಗಳು ಮಂಜೂರಾಗಿರುತ್ತವೆ.

 

ವಿಭಾಗೀಯ ಮಟ್ಟದ ಜಿಲ್ಲಾ ಖಜಾನೆಗಳಾದ ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಕಲಬುರಗಿ ಜಿಲ್ಲಾ ಖಜಾನೆಗಳು ಮತ್ತು ರಾಜ್ಯ ಪಿಂಚಣಿ ಪಾವತಿ ಹಾಗೂ ನಿರ್ವಹಣಾ ಖಜಾನೆ, ಬೆಂಗಳೂರು ಇವುಗಳಿಗೆ ಜಂಟಿ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ. ಉಳಿದ ಜಿಲ್ಲಾ ಖಜಾನೆಗಳಲ್ಲಿ ಉಪ ನಿರ್ದೇಶಕರು ಜಿಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ.

 

ಇವರಿಗೆ ಸಹಾಯಕರಾಗಿ ಸಹಾಯಕ ನಿರ್ದೇಶಕರು, ಸಹಾಯಕ ಖಜಾನಾಧಿಕಾರಿಗಳು ಕೆಲಸ ನಿರ್ವಹಿಸುತ್ತಿರುತ್ತಾರೆ. ಸಹಾಯಕ ನಿರ್ದೇಶಕರು ಹಾಗೂ ಸಹಾಯಕ ಖಜಾನಾಧಿಕಾರಿಗಳು ಉಪ ಖಜಾನಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಇದಲ್ಲದೇ, ಇಲಾಖೆಯ 70 ಸಹಾಯಕ ಖಜಾನಾಧಿಕಾರಿಗಳು ವಿವಿಧ ತಾಲ್ಲುಕು ಪಂಚಾಯತ್‍ಗಳಲ್ಲಿ ಸಹಾಯಕ ಲೆಕ್ಕಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ.

ಇತ್ತೀಚಿನ ನವೀಕರಣ​ : 18-09-2021 11:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಖಜಾನೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080